Kannada

Fact Check: ಸಿಆರ್‌ಪಿಎಫ್ ಟಿಎಂಸಿ ಬೆಂಬಲಿಗರನ್ನು ಬಂಗಾಳದಿಂದ ಹೊರಹಾಕುತ್ತಿದ್ದಾರೆಂದು ಸಂಬಂಧವಿಲ್ಲದ ಹಳೆಯ ವೀಡಿಯೊ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವುದು ಕಾಣಬಹುದು. ಇದು ಟಿಎಂಸಿ ಬೆಂಬಲಿಗರನ್ನು ಬಂಗಾಳ ಪೊಲೀಸರು ಬಂಗಾಳದಿಂದ ಹೊರಹಾಕುತ್ತಿರುವುದು ಎಂದು ಹೇಳಲಾಗುತ್ತಿದೆ.

Vinay Bhat

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನದಂದು ಸೋಮವಾರ ರಾಜಕೀಯ ಚಟುವಟಿಕೆಗಳು ತೀವ್ರಗೊಂಡವು, ರಾಜ್ಯಾದ್ಯಂತ ವಿವಿಧ ಪ್ರದೇಶಗಳಲ್ಲಿ ಪಕ್ಷಗಳ ನಡುವೆ ಸಂಭ್ರಮಾಚರಣೆ ಮತ್ತು ಘರ್ಷಣೆಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವುದು ಕಾಣಬಹುದು. ಇದು ಟಿಎಂಸಿ ಬೆಂಬಲಿಗರನ್ನು ಬಂಗಾಳ ಪೊಲೀಸರು ಬಂಗಾಳದಿಂದ ಹೊರಹಾಕುತ್ತಿರುವುದು ಎಂದು ಹೇಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸಿಆರ್‌ಪಿಎಫ್ ಮತ್ತು ಬಂಗಾಳ ಪೊಲೀಸರು ಟಿಎಂಸಿಯನ್ನು ಬಂಗಾಳದಿಂದ ಹೊರಹಾಕುತ್ತಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ 2023 ರದ್ದಾಗಿದ್ದು, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಮತ್ತು ಇತರ ಹಲವಾರು ಟಿಎಂಸಿ ನಾಯಕರನ್ನು ದೆಹಲಿ ಪೊಲೀಸರು ಕೃಷಿ ಭವನದಲ್ಲಿ ಧರಣಿ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿಸಿದ ಸಂದರ್ಭದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಟೈಮ್ಸ್ ಆಫ್ ಇಂಡಿಯಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಕ್ಟೋಬರ್ 4, 2023 ರಂದು ಪ್ರಕಟಿಸಿದ ಇದೇ ವೈರಲ್ ವೀಡಿಯೊದ ಪೂರ್ಣ ಆವೃತ್ತಿ ಸಿಕ್ಕಿತು. ‘ಮಹುವಾ ಮೊಯಿತ್ರಾ ಅವರನ್ನು ಪೊಲೀಸರು ಕೃಷಿ ಭವನದಿಂದ ಬಲವಂತವಾಗಿ ಎಳೆದುಕೊಂಡು ಹೋದರು' ಎಂಬ ಶೀರ್ಷಿಕೆ ಇದನ್ನು ನೀಡಲಾಗಿದೆ.

ಗ್ರಾಮೀಣಾಭಿವೃದ್ಧಿ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಮೂರು ಗಂಟೆಗಳ ಕಾಲ ಕಾಯುವಂತೆ ಒತ್ತಾಯಿಸಿದ ನಂತರ ನಿಯೋಗವನ್ನು ಭೇಟಿ ಮಾಡಲು ನಿರಾಕರಿಸಿದ ನಂತರ ಟಿಎಂಸಿ ನಾಯಕರನ್ನು ಕೃಷಿ ಭವನದಿಂದ ಬಲವಂತವಾಗಿ ಕರೆದೊಯ್ದು ಬಂಧಿಸಲಾಯಿತು ಎಂದು ವರದಿ ಮಾಡಿದೆ. ನಂತರ ಟಿಎಂಸಿ ನಿಯೋಗವು ಸಚಿವರನ್ನು ಭೇಟಿಯಾಗದೆ ಹೊರಡುವುದಿಲ್ಲ ಎಂದು ಹೇಳಿ ಧರಣಿ ಕುಳಿತಿತು.

ಅಕ್ಟೋಬರ್ 3, 2023 ರಂದು ಇಂಡಿಯಾ ಟುಡೇ ಕೂಡ ವೈರಲ್ ವೀಡಿಯೊ ಜೊತೆಗೆ ಈ ಘಟನೆಯನ್ನು ವರದಿ ಮಾಡಿದೆ. ಇತರ ಟಿಎಂಸಿ ನಾಯಕರೊಂದಿಗೆ ಮೊಯಿತ್ರಾ ಪ್ರತಿಭಟನೆ ನಡೆಸುತ್ತಿದ್ದಾಗ ದೆಹಲಿ ಪೊಲೀಸರು ಅವರನ್ನು ಎಳೆದೊಯ್ದರು ಎಂದು ಇದರಲ್ಲಿ ಹೇಳಲಾಗಿದೆ. ರಾಷ್ಟ್ರ ರಾಜಧಾನಿಯ ಕೃಷಿ ಭವನದೊಳಗೆ MNREGA ನಿಧಿ ಬಿಡುಗಡೆಗೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ ಎಂದು ಅದು ಉಲ್ಲೇಖಿಸಿದೆ.

ಅಕ್ಟೋಬರ್ 4, 2023 ರಂದು ಒನ್ಇಂಡಿಯಾ ನ್ಯೂಸ್ ಚಾನೆಲ್‌ಗೆ ಅಪ್‌ಲೋಡ್ ಮಾಡಲಾದ ಯೂಟ್ಯೂಬ್ ವೀಡಿಯೊವೂ ನಮಗೆ ಸಿಕ್ಕಿತು. ಈ ವೀಡಿಯೊದಲ್ಲಿ, ಈ ಘಟನೆ ನವದೆಹಲಿಯ ಕೃಷಿ ಭವನದಲ್ಲಿ ನಡೆದಿದ್ದು, ಟಿಎಂಸಿಯ ಕೆಲವು ಹಿರಿಯ ಪಕ್ಷದ ನಾಯಕರೊಂದಿಗೆ ಮೊಯಿತ್ರಾ ಅವರನ್ನು ಧರಣಿ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಪೂರ್ವ ನಿಗದಿತ ಭೇಟಿಯ ಹೊರತಾಗಿಯೂ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದರಿಂದ ಪ್ರತಿಭಟನೆ ನಡೆಯಿತು.

ಇದೇ ವೈರಲ್ ವೀಡಿಯೊವನ್ನು ಸ್ವತಃ ಮಹುವಾ ಮೊಯಿತ್ರಾ ಅವರೇ ಅಕ್ಟೋಬರ್ 3, 2023 ರಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವುದು ನಮಗೆ ಸಿಕ್ಕಿದೆ. "ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾಯಿತ ಸಂಸದರಿಗೆ ಭಾರತ ಸರ್ಕಾರದ ಸಚಿವರನ್ನು ಭೇಟಿ ಮಾಡಲು ಅಪಾಯಿಂಟ್ಮೆಂಟ್ ನೀಡಿದ ನಂತರ (3 ಗಂಟೆಗಳ ಕಾಲ ಕಾಯುವಂತೆ ಮಾಡಿದ ನಂತರ ಅವರು ಗೌರವಿಸಲು ನಿರಾಕರಿಸಿದರು) ಅವರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ" ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, 2023 ರಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರನ್ನು ದೆಹಲಿ ಪೊಲೀಸರು ಕೃಷಿ ಭವನದಲ್ಲಿ ಧರಣಿ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿಸಿದ ವೀಡಿಯೊವನ್ನು ಈಗಿನ ಪಶ್ಚಿಮ ಬಂಗಳಾದ ಚುನಾವಣಾ ಫಲಿತಾಂಶಕ್ಕೆ ಲಿಂಕ್ ಮಾಡಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: BJP leader hoists party flag during Independence Day? No, here are the facts

Fact Check: ഇത് മുഖ്യമന്ത്രി വി ഡി സതീശന്റെ വാഹനവ്യൂഹമോ? വീഡിയോയുടെ സത്യമറിയാം

Fact Check: முதல்வர் விஜய்யின் பெற்றோரின் திருமணத்தின் போது அவர் அருகில் இருந்ததாக பரவும் புகைப்படம் உண்மையானதா அல்லது போலியானதா?

Fact Check: ಬಸ್ ಹತ್ತುವಾಗ ಮಹಿಳೆಯನ್ನು ಅಸಭ್ಯವಾಗಿ ಮುಟ್ಟಿದ ಬಸ್ ಕಂಡಕ್ಟರ್ ಎಂದು ಹೇಳುವ ಈ ವೀಡಿಯೊ ಚಿತ್ರಿಸಲಾಗಿದೆ

Fact Check : ప్రధాని మోదీని దూషించినందుకు తల్లిదండ్రులు కుమార్తెను కొట్టారా? లేదు, వైరల్ వీడియో పాతది