Kannada

Fact Check: ಭಾರತೀಯ ರಾಷ್ಟ್ರಧ್ವಜವನ್ನು ಅಪವಿತ್ರಗೊಳಿಸುವ ವೀಡಿಯೊ ಕರಾಚಿಯಿಂದ ಬಂದಿದೆ, ಕೇರಳದ್ದಲ್ಲ

ಭಾರತೀಯ ರಾಷ್ಟ್ರಧ್ವಜದ ಮೇಲೆ ವಾಹನಗಳು ಚಲಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಳಕೆದಾರರು ಈ ವೀಡಿಯೊ ಕೇರಳದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ.

Vinay Bhat

ಭಾರತೀಯ ರಾಷ್ಟ್ರಧ್ವಜದ ಮೇಲೆ ವಾಹನಗಳು ಚಲಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಳಕೆದಾರರು ಈ ವೀಡಿಯೊ ಕೇರಳದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕೇರಳದ ವಯನಾಡಿನಿಂದ ಈ ವಿಡಿಯೋ ಬಂದಿದೆ ಸ್ನೇಹಿತರೆ. ಈ ಭಯೋತ್ಪಾದಕ ಸಮುದಾಯವನ್ನೂ ಏನು ಮಾಡೋಣ.’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಸೌತ್ ಚೆಕ್ ತನಿಖೆಯು ಈ ವೀಡಿಯೊ ಪಾಕಿಸ್ತಾನದ ಕರಾಚಿಯಿಂದ ಬಂದಿದೆ ಎಂದು ಕಂಡುಹಿಡಿದಿದೆ.

ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಕೆಲ ಜನರು ಪಾಕಿಸ್ತಾನದ ಧ್ವಜವನ್ನು ಹಿಡಿದಿರುವುದನ್ನು ನಾವು ಕಂಡುಕೊಂಡಿದ್ದೇವೆ, ಹೀಗಾಗಿ ಇದು ಪಾಕಿಸ್ತಾನದ್ದಾಗಿರಬಹುದು ಎಂಬ ಸುಳಿವು ನಮಗೆ ಸಿಕ್ಕಿತು. ಬಳಿಕ ನಾವು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಯೂಟ್ಯೂಬ್​ ಜೂನ್ 6, 2022 ರಂದು ರಿಯಲ್ ಇಂಡಿಯನ್ ಎಂಬ ಚಾನೆಲ್ ಈ ವೀಡಿಯೊವನ್ನು ಪ್ರಕಟಿಸಿರುವುದು ಸಿಕ್ಕಿದೆ. ‘‘ಪಾಕಿಸ್ತಾನಿ ಜನರು ಭಾರತೀಯ ಧ್ವಜದ ಮೇಲೆ ವಾಹನ ಚಲಾಯಿಸುತ್ತಿದ್ದಾರೆ’’ ಎಂಬ ಶೀರ್ಷಿಕೆ ಇದಕ್ಕೆ ನೀಡಲಾಗಿದೆ.

ವೀಡಿಯೊವನ್ನು ವಿಶ್ಲೇಷಿಸಿದಾಗ, ವೀಡಿಯೊದಲ್ಲಿ ಅಂಗಡಿಗಳ ಮುಂದೆ ಸನಮ್ ಬೂಟೀಕ್ ಬೋರ್ಡ್ ನೇತಾಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ ನಕ್ಷೆಗಳಲ್ಲಿ ಪಾಕಿಸ್ತಾನದಲ್ಲಿರುವ ಸನಮ್ ಬೂಟೀಕ್ ಅನ್ನು ಹುಡುಕಿದೆವು. ಆಗ ಈ ಅಂಗಡಿಯು ಕರಾಚಿಯಲ್ಲಿದೆ ಎಂದು ಕಂಡುಕೊಂಡೆವು.

ಸ್ಟ್ರೀಟ್ ವ್ಯೂ ಬಳಸಿ, ವೈರಲ್ ವೀಡಿಯೊದಲ್ಲಿರುವ ಬೋರ್ಡ್ ಮತ್ತು ಗೂಗಲ್ ನಕ್ಷೆಯಲ್ಲಿ ಕಾಣುವುದು ಒಂದೇ ಆಗಿವೆ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ.

ವೈರಲ್ ವೀಡಿಯೊದಲ್ಲಿ ಕಂಡುಬರುವ ಅಂಗಡಿಯ ಸಮೀಪವಿರುವ ಕಟ್ಟಡಗಳನ್ನು ಸಹ ನಾವು ಗೂಗಲ್ ನಕ್ಷೆಗಳಲ್ಲಿ ಗುರುತಿಸಬಹುದು.

ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಭಾರತದ ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿಸುವ ವೈರಲ್ ವೀಡಿಯೊ ಭಾರತದ ಕೇರಳದಿಂದಲ್ಲ, ಪಾಕಿಸ್ತಾನದ ಕರಾಚಿಯಿಂದ ಬಂದಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Soldiers protest against NDA govt in Bihar? No, claim is false

Fact Check: ‍വോട്ടുതേടി ഓലക്കുടിലിന് മുന്നില്‍? ചിത്രത്തിന്റെ സത്യമറിയാം

Fact Check: பீகாரில் பாஜகவின் வெற்றி போராட்டங்களைத் தூண்டுகிறதா? உண்மை என்ன

Fact Check: ಬಿಹಾರದಲ್ಲಿ ಬಿಜೆಪಿಯ ಗೆಲುವು ಪ್ರತಿಭಟನೆಗಳಿಗೆ ಕಾರಣವಾಯಿತೇ? ಇಲ್ಲ, ವೀಡಿಯೊ ಹಳೆಯದು

Fact Check: ఎన్‌ఐఏ జారీ చేసింది అంటూ సోషల్ మీడియాలో వైరల్ అవుతున్న తప్పుడు సమాచారం