Kannada

Fact Check: ಮೆಕ್ಕಾ ಮೇಲೆ ಹೌತಿ ಡ್ರೋನ್ ದಾಳಿ ಯತ್ನದ ದೃಶ್ಯವೆಂದು ವೈರಲ್ ಆಗಿರುವ ವಿಡಿಯೊ ಹಳೆಯದ್ದು

ಸೌದಿ ಅರೇಬಿಯಾದ ಪವಿತ್ರ ನಗರ ಮೆಕ್ಕಾ ಮೇಲೆ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಲು ಯತ್ನಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೊದಲ್ಲಿ ರಾತ್ರಿ ವೇಳೆ ಆಕಾಶದಲ್ಲಿ ಬೆಳಕು ಕಾಣಿಸಿಕೊಳ್ಳುವುದನ್ನು, ನಂತರ ದೊಡ್ಡ ಸದ್ದು ಕೇಳಿಸುವುದನ್ನು ಕಾಣಬಹುದು.

vinay bhat

ಸೌದಿ ಅರೇಬಿಯಾದ ಪವಿತ್ರ ನಗರ ಮೆಕ್ಕಾ ಮೇಲೆ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಲು ಯತ್ನಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೊದಲ್ಲಿ ರಾತ್ರಿ ವೇಳೆ ಆಕಾಶದಲ್ಲಿ ಬೆಳಕು ಕಾಣಿಸಿಕೊಳ್ಳುವುದನ್ನು, ನಂತರ ದೊಡ್ಡ ಸದ್ದು ಕೇಳಿಸುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ‘‘ಇತಿಹಾಸದಲ್ಲಿ ಮೊದಲ ಬಾರಿಗೆ, "ಮೆಕ್ಕಾ" ಮೇಲೆ "ಹೌತಿ ಬಂಡುಕೋರರು" ಡ್ರೋನ್ ದಾಳಿಗೆ ಪ್ರಯತ್ನಿಸಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೊ ಮೆಕ್ಕಾದ್ದಲ್ಲ. ಇದು ಕನಿಷ್ಠ ಸೆಪ್ಟೆಂಬರ್ 2025ರಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿತ್ತು.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೊದ ಪ್ರಮುಖ ದೃಶ್ಯಗಳನ್ನು ತೆಗೆದುಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಇದೇ ವಿಡಿಯೊವನ್ನು Middle East 24 2025ರ ಸೆಪ್ಟೆಂಬರ್ 12ರಂದು ಪ್ರಕಟಿಸಿರುವುದು ಪತ್ತೆಯಾಗಿದೆ.

ವರದಿಯಲ್ಲಿ ಸೌದಿ ಮಾಧ್ಯಮಗಳು ಮದೀನಾದಲ್ಲಿರುವ ಪ್ರವಾದಿ ಮಸೀದಿ (Masjid an-Nabawi) ಸಮೀಪ ನಡೆದ ಘಟನೆಯ ದೃಶ್ಯಗಳನ್ನು ಹಂಚಿಕೊಂಡಿವೆ ಎಂದು ಹೇಳಲಾಗಿತ್ತು. ಆ ಸಂದರ್ಭದಲ್ಲಿ ಆಕಾಶದಲ್ಲಿ ದೊಡ್ಡ ಸದ್ದು ಕೇಳಿಸಿದ್ದು ಮತ್ತು ಯಾವುದೋ ವಸ್ತು ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.

ಸೆಪ್ಟೆಂಬರ್ 12, 2025 ರಂದು ಇಸ್ಲಾಂ ಚಾನೆಲ್ ಟಿವಿ ಅಪ್‌ಲೋಡ್ ಮಾಡಿದ ಯೂಟ್ಯೂಬ್ ಶಾರ್ಟ್ಸ್ ನಮಗೆ ಸಿಕ್ಕಿತು. "ಮಸೀದಿ ಆನ್ ನಬವಿ ಬಳಿ ಸ್ಫೋಟ, ಆಕಾಶದಲ್ಲಿ ಕ್ಷಿಪಣಿ ಕಾಣಿಸುತ್ತಿದೆ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ಇದೆ. ಶೀರ್ಷಿಕೆಯ ಪ್ರಕಾರ, ಮದೀನಾದ ಮಸ್ಜಿದ್ ಆನ್ ನಬವಿ ಬಳಿ ದೊಡ್ಡ ಸ್ಫೋಟ ಕೇಳಿಬಂದಿದೆ ಮತ್ತು ಆಕಾಶದಲ್ಲಿ ಕ್ಷಿಪಣಿಯಂತಹ ವಸ್ತುವನ್ನು ನೋಡಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಆ ಸಮಯದಲ್ಲಿ ಅಧಿಕಾರಿಗಳು ಘಟನೆಯನ್ನು ಅಧಿಕೃತವಾಗಿ ದೃಢಪಡಿಸಿರಲಿಲ್ಲ ಎಂದು ಶೀರ್ಷಿಕೆಯಲ್ಲಿ ಹೇಳಲಾಗಿದೆ.

ಕೀವರ್ಡ್ ಹುಡುಕಾಟ ನಡೆಸಿದಾಗ ಅದೇ ದಿನ ಅಪ್‌ಲೋಡ್ ಮಾಡಲಾದ ಟೈಮ್ಸ್ ಆಫ್ ಇಂಡಿಯಾ ಯೂಟ್ಯೂಬ್ ವೀಡಿಯೊ ಕೂಡ ಸಿಕ್ಕಿತು, ಅದು ವೈರಲ್ ವಿಡಿಯೊದ ದೃಶ್ಯಗಳನ್ನು ಹೊಂದಿದೆ. ಅದರ ವಿವರಣೆಯಲ್ಲಿ, ಇಸ್ಲಾಂನ ಎರಡನೇ ಪವಿತ್ರ ಸ್ಥಳವಾದ ಮದೀನಾ ಮೇಲೆ ಆಕಾಶದಲ್ಲಿ ಸ್ಫೋಟ ಸಂಭವಿಸಿದ್ದು, ಭಯಭೀತರಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಯೆಮೆನ್‌ನ ಹೌತಿಗಳು ಇಸ್ರೇಲ್ ಕಡೆಗೆ ಹಾರಿಸಿದ ಕ್ಷಿಪಣಿಯನ್ನು ಪ್ರವಾದಿಯ ಮಸೀದಿಯ ಬಳಿ ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಮಸೀದಿ ಅಧಿಕಾರಿಗಳು ಸ್ಫೋಟವನ್ನು ದೃಢಪಡಿಸಿದರು ಆದರೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

ಅದಾಗ್ಯೂ 2026ರ ಸೆಪ್ಟೆಂಬರ್ 15ರಂದು ಸೌದಿ ಅರೇಬಿಯಾದ ಅಧಿಕಾರಿಗಳು, ಮೆಕ್ಕಾದ ದಕ್ಷಿಣ ಭಾಗದಲ್ಲಿ ಹೌತಿಗಳು ಕಳುಹಿಸಿದ್ದಾರೆ ಎಂದು ಹೇಳಲಾದ ಡ್ರೋನ್‌ವೊಂದನ್ನು ವಾಯು ರಕ್ಷಣಾ ಪಡೆಗಳು ತಡೆದು ನಾಶಪಡಿಸಿವೆ ಎಂದು ತಿಳಿಸಿದ್ದಾರೆ. ಸೌದಿ ನೇತೃತ್ವದ ಒಕ್ಕೂಟದ ವಕ್ತಾರ ತುರ್ಕಿ ಅಲ್-ಮಲಿಕಿ ಪ್ರಕಾರ, ಡ್ರೋನ್ ಮೆಕ್ಕಾದ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸುವ ಮುನ್ನವೇ ತಡೆದು ನಾಶಪಡಿಸಲಾಯಿತು. ಈ ಘಟನೆಗೆ ಸಂಬಂಧಿಸಿ ಸೌದಿ ಅಧಿಕಾರಿಗಳು ಮೆಕ್ಕಾ ಮತ್ತು ಇತರ ಪ್ರದೇಶಗಳಲ್ಲಿ ಭದ್ರತಾ ಎಚ್ಚರಿಕೆಗಳನ್ನು ಹೊರಡಿಸಿದ್ದರು. ವರದಿಗಳ ಪ್ರಕಾರ, ಮೆಕ್ಕಾ ಪ್ರದೇಶಕ್ಕೆ ಇತ್ತೀಚಿನ ಸಂಘರ್ಷದ ಸಂದರ್ಭದಲ್ಲಿ ಮೊದಲ ಬಾರಿಗೆ ಇಂತಹ ತುರ್ತು ಎಚ್ಚರಿಕೆ ನೀಡಲಾಗಿತ್ತು. ಆದರೆ ಈ ಡ್ರೋನ್ ಹೌತಿಗಳದ್ದೇ ಎಂಬ ಸೌದಿ ಅರೇಬಿಯಾದ ಆರೋಪವನ್ನು ಹೌತಿ ಸಂಘಟನೆ ನಿರಾಕರಿಸಿದೆ. ಮೆಕ್ಕಾ ಅಥವಾ ಇತರ ಪವಿತ್ರ ಸ್ಥಳಗಳಿಗೆ ತಾವು ಯಾವುದೇ ಬೆದರಿಕೆ ಒಡ್ಡಿಲ್ಲ ಎಂದು ಹೌತಿ ಮೂಲಗಳು ಹೇಳಿವೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಮೆಕ್ಕಾ ಮೇಲೆ ಹೌತಿಗಳು ಡ್ರೋನ್ ದಾಳಿ ನಡೆಸಲು ಯತ್ನಿಸಿದಾಗ ಸೌದಿ ಅರೇಬಿಯಾ ಅದನ್ನು ತಡೆದ ದೃಶ್ಯ ಎಂದು ವೈರಲ್ ಆಗಿರುವ ವಿಡಿಯೊ ಸುಳ್ಳು, ಈ ವಿಡಿಯೊ ಕನಿಷ್ಠ 2025ರ ಸೆಪ್ಟೆಂಬರ್‌ನಿಂದಲೇ ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಅದು ಮದೀನಾದ ಮಸ್ಜಿದ್ ಅನ್-ನಬವಿ ಸಮೀಪದ ಘಟನೆಯೊಂದಿಗೆ ಸಂಬಂಧಿಸಿದೆ.

Fact Check: Flydubai flight attack video viral? No, here are the facts

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: தாராபுரம் இடைத்தேர்தலில் திமுக 35% வாக்குகள் பெற்று வெற்றி பெறும் என தந்தி டிவி கருத்துக்கணிப்பு வெளியிட்டதா? உண்மை என்ன

Fact Check: ಇದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದ ವಿಡಿಯೊ ಅಲ್ಲ

Fact Check: ఢిల్లీలో సీఈసీ జ్ఞానేశ్ కుమార్‌కు వ్యతిరేకంగా నిరసనా? కాదు, పాత వీడియో వైరల్