Kannada

Fact Check: ಬೆಂಗಳೂರು ಮೆಟ್ರೋದಲ್ಲಿ ಕಾಲ ಮೇಲೆ ಕಾಲು ಹಾಕಿ ವ್ಯಕ್ತಿಯೊಬ್ಬನ ದುರ್ವರ್ತನೆ ಎಂದು ಹೈದರಾಬಾದ್​ನ ವೀಡಿಯೊ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಒಬ್ಬ ವ್ಯಕ್ತಿ ಮೆಟ್ರೋದಲ್ಲಿ ಸೀಟಿನ ಮೇಲೆ ತನ್ನ ಬೂಟುಗಳನ್ನು ಇರಿಸಿರುವುದನ್ನು ಕಾಣಬಹುದು. ಇದನ್ನು ಕಂಡ ಸಯಪ್ರಯಾಣಿಕ ಆಕ್ಷೇಪ ವ್ಯಕ್ತಪಡಿಸುತ್ತಾನೆ ಮತ್ತು ಇಬ್ಬರ ನಡುವೆ ಜೋರಾಗಿ ಮಾತುಕತೆ ನಡೆಯುತ್ತದೆ.

vinay bhat

ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಒಬ್ಬ ವ್ಯಕ್ತಿ ಮೆಟ್ರೋದಲ್ಲಿ ಸೀಟಿನ ಮೇಲೆ ತನ್ನ ಬೂಟುಗಳನ್ನು ಇರಿಸಿರುವುದನ್ನು ಕಾಣಬಹುದು. ಇದನ್ನು ಕಂಡ ಸಯಪ್ರಯಾಣಿಕ ಆಕ್ಷೇಪ ವ್ಯಕ್ತಪಡಿಸುತ್ತಾನೆ ಮತ್ತು ಇಬ್ಬರ ನಡುವೆ ಜೋರಾಗಿ ಮಾತುಕತೆ ನಡೆಯುತ್ತದೆ. ಬಳಿಕ ಆ ವ್ಯಕ್ತಿ ಕಾಲು ಕೆಳಗೆ ಇಟ್ಟು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಾನೆ. ಇದು ಬೆಂಗಳೂರಿನ ಮೆಟ್ರೋದಲ್ಲಿ ನಡೆದ ಘಟನೆ ಎಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬೆಂಗಳೂರು ಮೆಟ್ರೋದಲ್ಲಿ ವ್ಯಕ್ತಿಯೊಬ್ಬನ  ದುರ್ವರ್ತನೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಹೈದರಾಬಾದ್ ಮೆಟ್ರೋದಲ್ಲಿ ನಡೆದ ಘಟನೆ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಜೂನ್ 2 ರಂದು ಇಂಡಿಯಾ ಟುಡೆ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿತು. ಹೈದರಾಬಾದ್ ಮೆಟ್ರೋದಲ್ಲಿ ಬೆಳಗಿನ ಜನನಿಬಿಡ ಪ್ರಯಾಣದ ಸಮಯದಲ್ಲಿ ಒಬ್ಬ ವ್ಯಕ್ತಿ ಹಲವಾರು ಆಸನಗಳ ಕೋಚ್ ಸೀಟಿಂಗ್ ಮೇಲೆ ತನ್ನ ಬೂಟುಗಳನ್ನು ಇರಿಸಿ ಕುಳಿತಿರುವ ವೀಡಿಯೊ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿದೆ.

ಜೂನ್ 2 ರಂದು free press journal ಕೂಡ ವೈರಲ್ ವೀಡಿಯೊ ಜೊತೆಗೆ, ಹೈದರಾಬಾದ್ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಹಲವು ಸೀಟುಗಳ ಮೇಲೆ ಕಾಲು ಇಟ್ಟುಕೊಂಡು ಕುಳಿತಿದ್ದು, ಇದರಿಂದಾಗಿ ಸಹ ಪ್ರಯಾಣಿಕರೊಂದಿಗೆ ವಾಗ್ವಾದ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಗರಿಕ ಪ್ರಜ್ಞೆ ಮತ್ತು ಪ್ರಯಾಣಿಕರ ಶಿಷ್ಟಾಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಬರೆದುಕೊಂಡಿದೆ.

ಇದು ಹೈದರಾಬಾದ್​ ಮೆಟ್ರೋದಲ್ಲಿ ನಡೆದಿರುವ ಘಟನೆ ಎಂದು ಅನೇಕ ಸುದ್ದಿ ಮಾಧ್ಯಮಗಳು ವರದಿ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

ಜೂನ್ 3 ರಂದು Hyderabad mail ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದೆ. ನಾಗೋಲ್ ನಿಂದ ರಾಯದುರ್ಗಕ್ಕೆ ಹೈದರಾಬಾದ್ ಮೆಟ್ರೋ ರೈಲು ಸೇವೆಯಲ್ಲಿ ಸೋಮವಾರ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಮೆಟ್ರೋ ಕಿಟಕಿಯ ಮೇಲೆ ಕಾಲು ಇಟ್ಟು ಸಹ ಪ್ರಯಾಣಿಕರ ಆಕ್ಷೇಪಣೆಯ ಹೊರತಾಗಿಯೂ ತನ್ನ ನಡವಳಿಕೆಯನ್ನು ಬದಲಾಯಿಸಲು ನಿರಾಕರಿಸಿದ ಆರೋಪದ ಮೇಲೆ ದಂಡ ವಿಧಿಸಲಾಗಿದೆ ಮತ್ತು ಪ್ರಕರಣ ದಾಖಲಿಸಲಾಗಿದೆ ಎಂದು ಬರೆದುಕೊಂಡಿದೆ.

ಹೈದರಾಬಾದ್ ಮೆಟ್ರೋ ರೈಲು ಅಧಿಕಾರಿಗಳ ಪ್ರಕಾರ, ಹಲವಾರು ಪ್ರಯಾಣಿಕರು ಆ ವ್ಯಕ್ತಿಯ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಅವರು ಅದೇ ರೀತಿ ಕುಳಿತುಕೊಳ್ಳುವುದನ್ನು ಮುಂದುವರಿಸುವುದಾಗಿ ವಾದಿಸಿದ್ದಾರೆ. ನಂತರ ಸಹ ಪ್ರಯಾಣಿಕರೊಬ್ಬರು ಮೆಟ್ರೋ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ರಾಯದುರ್ಗ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸ್ ಕ್ರಮ ಜರುಗಿಸಲಾಗಿದೆ. ಪೊಲೀಸರು ಪ್ರಯಾಣಿಕನನ್ನು ರಾಯದುರ್ಗ ಮೆಟ್ರೋ ನಿಲ್ದಾಣದಲ್ಲಿ ಬಂಧಿಸಿದರು. ಪ್ರಯಾಣಿಕನನ್ನು ಚೈತನ್ಯ ಎಂದು ಗುರುತಿಸಲಾಗಿದೆ. ಹೈದರಾಬಾದ್ ಮೆಟ್ರೋ ರೈಲು ಲಿಮಿಟೆಡ್ (HMRL) ಜನರಲ್ ಮ್ಯಾನೇಜರ್ (ಭದ್ರತೆ) ಶ್ರೀನಾಥ್ ರೆಡ್ಡಿ, ಅವರ ವರ್ತನೆಗಾಗಿ ಮೆಟ್ರೋ ರೈಲು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ₹250 ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬೆಂಗಳೂರು ಮೆಟ್ರೋದಲ್ಲಿ ಕಾಲ ಮೇಲೆ ಕಾಲು ಹಾಕಿ ವ್ಯಕ್ತಿಯೊಬ್ಬನ ದುರ್ವರ್ತನೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಹೈದರಾಬಾದ್​ನ ಮೆಟ್ರೋದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Video shows Ukraine’s recent strike on Russia’s Kuibyshev oil refinery? No, here are the facts

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: இரு கைகளும் இல்லாத பெண் ஜிம்னாஸ்டிக்ஸ் செய்யும் வைரல் காணொலி உண்மையா?

Fact Check: ದೆಹಲಿಯಲ್ಲಿ ಮಳೆಯ ನಡುವೆಯೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ? ಇಲ್ಲ, ಇದು ಹಳೆಯ ವಿಡಿಯೊ

Fact Check: ఢిల్లీలో సీఈసీ జ్ఞానేశ్ కుమార్‌కు వ్యతిరేకంగా నిరసనా? కాదు, పాత వీడియో వైరల్