Kannada

Fact Check: ವೃಷಭಾವತಿ‌ ನದಿಯಲ್ಲಿ 500 ರೂ. ಮುಖಬೆಲೆಯ ಕಂತೆ ಕಂತೆ ನೋಟು ಪತ್ತೆ?, ವೈರಲ್ ವೀಡಿಯೊದ ಸತ್ಯ ಇಲ್ಲಿದೆ

ನದಿಯ ದಡವೊಂದರ ಮೇಲೆ 500 ರೂ. ಮುಖಬೆಲೆಯ ನೋಟುಗಳ ಕಟ್ಟು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಬಳಿ ವೃಷಭಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕೆಳಭಾಗದಲ್ಲಿ ಈ ನೋಟುಗಳು ಪತ್ತೆಯಾಗಿವೆ ಎಂದು ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

vinay bhat

ನದಿಯ ದಡವೊಂದರ ಮೇಲೆ 500 ರೂ. ಮುಖಬೆಲೆಯ ನೋಟುಗಳ ಕಟ್ಟು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಬಳಿ ವೃಷಭಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕೆಳಭಾಗದಲ್ಲಿ ಈ ನೋಟುಗಳು ಪತ್ತೆಯಾಗಿವೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ದಾರಿತಪ್ಪಿಸುವ ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇವು ಶಾಲಾ ಪ್ರಾಜೆಕ್ಟ್ ಉದ್ದೇಶಕ್ಕಾಗಿ ಬಳಸುವ ನಕಲಿ ನೋಟುಗಳು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಆಗಸ್ಟ್ 20 ರಂದು ವಿಜಯ ಕರ್ನಾಟಕ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿತು. ಬಿಡದಿ ಸಮೀಪದ ವೃಷಭಾವತಿ ನದಿಯ ಸೇತುವೆ ಕೆಳಗೆ ₹100 ಹಾಗೂ ₹500 ಮುಖಬೆಲೆಯ ನೋಟುಗಳ ಚೀಲ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಭಾರಿ ಕುತೂಹಲ ಹಾಗೂ ಗೊಂದಲ ಸೃಷ್ಟಿಸಿದೆ. ನದಿಯ ಕೊಳಚೆ ನೀರಿನ ಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನೋಟುಗಳ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜನರು ಸೇತುವೆ ಮೇಲೆ ಮುಗಿಬಿದ್ದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಹಿತಿ ನೋಟುಗಳ ಜೆರಾಕ್ಸ್‌ ಮೇಲೆ 'ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ' ಎಂಬ ಪ್ರಿಂಟ್‌ ಕಂಡು ಬಂದಿದೆ ಎಂಬ ಮಾಹಿತಿ ಇದರಲ್ಲಿದೆ.

 Asianet News ಕೂಡ ಈ ಘಟನೆ ಕುರಿತು ವರದಿ ಮಾಡಿದ್ದು, ನದಿಯ ನೀರಿನ ಬಳಿ ಚೀಲಗಳಲ್ಲಿ ಹಾಗೂ ಕಲ್ಲುಗಳ ಮೇಲೆ ಬಿಡಿಬಿಡಿಯಾಗಿ ಬಿದ್ದಿದ್ದ ಈ ನೋಟುಗಳನ್ನು ದೂರದಿಂದ ನೋಡಿದಾಗ ಅಸಲಿ ನೋಟುಗಳಂತೆಯೇ ಕಾಣುತ್ತಿದ್ದವು. ಆದರೆ, ಬಿಡದಿ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ನದಿಯ ದಂಡೆಗೆ ಇಳಿದು, ಕಲ್ಲುಗಳ ಮೇಲೆ ಬಿದ್ದಿದ್ದ ನೋಟುಗಳ ಬಳಿ ತೆರಳಿ ಪರಿಶೀಲನೆ ನಡೆಸಿದಾಗ ನೋಟುಗಳು ಅಸಲಿಯಲ್ಲ, ಬದಲಾಗಿ ಬಣ್ಣದ ಜೆರಾಕ್ಸ್ ಪ್ರತಿಗಳು ಎಂಬುದು ತಿಳಿದುಬಂದಿದೆ. ಈ ಎಲ್ಲಾ ನೋಟುಗಳ ಮೇಲೆ 'ಶಾಲಾ ಪ್ರಾಜೆಕ್ಟ್ ಬಳಕೆ ಉದ್ದೇಶಕ್ಕಾಗಿ' (For School Project Purpose Only) ಎಂದು ಮುದ್ರಿಸಲಾಗಿತ್ತು.

ಈ ಕುರಿತು ಬಿಡದಿ ಠಾಣೆ ಪೊಲೀಸರ ಹೇಳಿಕೆಯನ್ನು ಪ್ರಜಾವಾಣಿ ಪ್ರಕಟಿಸಿದ್ದು, ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ, ಸ್ಥಳಕ್ಕೆ ಹೋದೆವು. ನೋಟುಗಳಿದ್ದ ಜಾಗಕ್ಕೆ ತೆರಳಿ ಪರಿಶೀಲಿಸಿದಾಗ, ಅವು ನಕಲಿ ನೋಟುಗಳೆಂದು ಗೊತ್ತಾಯಿತು. ಪತ್ತೆಯಾಗಿರುವ ಅಷ್ಟು ನೋಟುಗಳು ₹100 ಮತ್ತು ₹500ರಂತೆ ಕಾಣುವ ನೋಟಿನ ಜೆರಾಕ್ಸ್ ಪ್ರತಿಗಳಾಗಿವೆ. ಇವುಗಳ ಮೇಲೆ ಶಾಲಾ ಪ್ರಾಜೆಕ್ಟ್‌ ಬಳಕೆ ಉದ್ದೇಶಕ್ಕಾಗಿ ಎಂದು ಬರೆಯಲಾಗಿದೆ ಎಂದು ಬಿಡದಿ ಠಾಣೆ ಪೊಲೀಸರು ತಿಳಿಸಿದರು ಎಂದು ಬರೆದುಕೊಂಡಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೃಷಭಾವತಿ‌ ನದಿಯಲ್ಲಿ 500 ರೂ. ಮುಖಬೆಲೆಯ ಕಂತೆ ಕಂತೆ ನೋಟು ಪತ್ತೆ ಆಗಿರುವುದು ನಿಜವಾದರೂ ಅದು ಜೆರಾಕ್ಸ್ ಪ್ರತಿಗಳಾಗಿವೆ, ವರ್ಜಿನಲ್ ನೋಟ್ ಅಲ್ಲ. ಈ ಎಲ್ಲಾ ನೋಟುಗಳು ಶಾಲಾ ಮಕ್ಕಳು ಪ್ರಾಜೆಕ್ಟ್​ಗಾಗಿ ಬಳಸಿ ನಂತರ ಅದನ್ನು ಎಸೆದಿದ್ದಾರೆ ಎಂಬುದು ಸ್ಪಷ್ಟವಾಗಿದೆ.

Fact Check: Video shows Ukraine’s recent strike on Russia’s Kuibyshev oil refinery? No, here are the facts

Fact Check: കൊല്‍ക്കത്തയില്‍ വിമാനത്താവളത്തിനായി മുസ്ലിം പള്ളി പൊളിക്കുന്ന ദൃശ്യങ്ങള്‍? വീഡിയോയുടെ സത്യമറിയാം

Fact Check: இரு கைகளும் இல்லாத பெண் ஜிம்னாஸ்டிக்ஸ் செய்யும் வைரல் காணொலி உண்மையா?

Fact Check: ದೆಹಲಿಯಲ್ಲಿ ಮಳೆಯ ನಡುವೆಯೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ? ಇಲ್ಲ, ಇದು ಹಳೆಯ ವಿಡಿಯೊ

Fact Check: ఢిల్లీలో సీఈసీ జ్ఞానేశ్ కుమార్‌కు వ్యతిరేకంగా నిరసనా? కాదు, పాత వీడియో వైరల్