Kannada

Fact Check: ಅಯತೊಲ್ಲ ಅಲಿ ಖಮೇನಿ ಅವರ ಅಂತಿಮ ಯಾತ್ರೆ ಎಂದು ಸಂಬಂಧವಿಲ್ಲದ ಹಳೇಯ ವೀಡಿಯೊ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಸುತ್ತಿದ ಶವಪೆಟ್ಟಿಗೆಯನ್ನು ಆಂಬ್ಯುಲೆನ್ಸ್‌ನಿಂದ ಕೆಳಗಿಳಿಸುತ್ತಿರುವುದನ್ನು ಕಾಣಬಹುದು. ಇದು ಅಲಿ ಖಮೇನಿ ಅವರ ಪಾರ್ಥೀವ ಶರೀರ ಎಂದು ಹೇಳಲಾಗುತ್ತಿದೆ.

vinay bhat

ಕಳೆದ ಕೆಲವು ದಿನಗಳಿಂದ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರವಾಗಿ ಉಲ್ಬಣಗೊಂಡಿದೆ. ಫೆಬ್ರವರಿ 28, 2026 ರಂದು ನಡೆಸಿದ ದಾಳಿಯಲ್ಲಿ ಸುಪ್ರೀಂ ನಾಯಕ ಅಲಿ ಖಮೇನಿ ಕೊಲ್ಲಲ್ಪಟ್ಟರು ಎಂದು ಇರಾನಿನ ರಾಜ್ಯ ಮಾಧ್ಯಮ ವರದಿ ಮಾಡಿದೆ. 86 ವರ್ಷ ವಯಸ್ಸಿನ ನಾಯಕನ ನಿಧನವನ್ನು ಮಾರ್ಚ್ 1 ರಂದು ಅಧಿಕೃತವಾಗಿ ಘೋಷಿಸಲಾಯಿತು, ನಂತರ 40 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಯಿತು. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಸುತ್ತಿದ ಶವಪೆಟ್ಟಿಗೆಯನ್ನು ಆಂಬ್ಯುಲೆನ್ಸ್‌ನಿಂದ ಕೆಳಗಿಳಿಸುತ್ತಿರುವುದನ್ನು ಕಾಣಬಹುದು. ಇದು ಅಲಿ ಖಮೇನಿ ಅವರ ಪಾರ್ಥೀವ ಶರೀರ ಎಂದು ಹೇಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇರಾನಿಯ ಖಮೇನಿ ಮುಖ್ಯಸ್ಥನ ಅಂತಿಮ ಯಾತ್ರೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಇರಾಕ್‌ನ ಶುವಾಯ್ಲತ್ ಎಂಬ ಬುಡಕಟ್ಟಿನ ಮುಖ್ಯಸ್ಥ ಶೇಖ್ ಅರ್ಕನ್ ಹಮೀದ್ ಮೋಹನ್ ಅಲ್-ಖೈರುಲ್ಲಾ ಅವರ ನಿಧನದ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟ ನಡೆಸಿದಾಗ, ಅದೇ ವೀಡಿಯೊವನ್ನು ಫೆಬ್ರವರಿ 3 ರಂದು ಅನೇಕ ಜನರು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿರುವುದು ಕಂಡುಬಂತು. ಇರಾಕ್​ನ ಸಾಮಾಜಿಕ ಕಾರ್ಯಕರ್ತ ಶುವಾಯ್ಲತ್ ಕುಲಗಳ ಜನರಲ್ ಶೇಖ್ ಅರ್ಕನ್ ಹಮೀದ್ ಮೋಹನ್ ನಿಧನರಾದ ಮಾಹಿತಿ ಇದರಲ್ಲಿದೆ.

ಫೆಬ್ರವರಿ 3 ರಂದು ಸೈಯದ್ ಸಲೇಹ್ ಎಂಬ ಫೇಸ್‌ಬುಕ್ ಖಾತೆಯಿಂದ 1 ನಿಮಿಷ ಮತ್ತು 41 ಸೆಕೆಂಡುಗಳ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಇದರ ಕೊನೆಯ ಭಾಗವು (59ನೇ ಸೆಕೆಂಡ್‌ನಿಂದ 1 ನಿಮಿಷ 41 ಸೆಕೆಂಡ್ ವರೆಗೆ) ವೈರಲ್ ವೀಡಿಯೊಕ್ಕೆ ಸಂಪೂರ್ಣವಾಗಿ ಹೋಲುತ್ತದೆ. ಎರಡೂ ವೀಡಿಯೊಗಳಲ್ಲಿ ಅದೇ ಜನರು ಮತ್ತು ಅದೇ ಸುತ್ತಮುತ್ತಲಿನ ಅಂಶಗಳನ್ನು ಕಾಣಬಹುದು. ಈ ವೀಡಿಯೊದ ಮೊದಲ ಭಾಗದಲ್ಲಿ, ವ್ಯಕ್ತಿಯೋರ್ವ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವುದನ್ನು ಕೇಳಬಹುದು. ಈ ಸಮಯದಲ್ಲಿ, ವಯಸ್ಸಾದ ವ್ಯಕ್ತಿಯ ಚಿತ್ರವನ್ನು ಸಹ ಇನ್‌ಸೆಟ್‌ನಲ್ಲಿ ತೋರಿಸಲಾಗಿದೆ.

ಹುಡುಕಾಟದ ಸಮಯದಲ್ಲಿ ಇಲ್ಲಿ ತೋರಿಸಿರುವ ಫೋಟೋದಲ್ಲಿರುವ ವ್ಯಕ್ತಿ ಶೇಖ್ ಅರ್ಕನ್ ಹಮೀದ್ ಮೋಹನ್ ಅಲ್ ಖೈರುಲ್ಲಾ ಎಂದು ತಿಳಿದುಬಂದಿದೆ. ಅವರು ಇರಾಕ್‌ನ ಶುವಾಯ್ಲತ್ ಬುಡಕಟ್ಟಿನ ಮುಖ್ಯಸ್ಥ ಶೇಖ್. ಅನೇಕ ಇರಾಕಿಗಳು ಅವರ ಫೋಟೋದೊಂದಿಗೆ ಫೇಸ್‌ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಂತಹ ಕೆಲವು ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಇದಲ್ಲದೆ, ಅನೇಕ ಪೋಸ್ಟ್‌ಗಳಲ್ಲಿ ಅವರ ದೇಹವನ್ನು ಆಂಬ್ಯುಲೆನ್ಸ್‌ನಿಂದ ಮತ್ತು ಅಂತ್ಯಕ್ರಿಯೆಯ ವಿವಿಧ ಕೋನಗಳಿಂದ ತೆಗೆದ ವೀಡಿಯೊ ಸಿಕ್ಕಿವೆ. ಈ ಪೈಕಿ ಅರ್ಕನ್ ಹಮೀದ್ ಮೋಹನ್ ಅವರ ಅಂತ್ಯಕ್ರಿಯೆಯ ಯೂಟ್ಯೂಬ್ ವೀಡಿಯೊವೊಂದರಲ್ಲಿ ವೈರಲ್ ವೀಡಿಯೊದಲ್ಲಿ ಅಳುತ್ತಿರುವ ಅದೇ ವ್ಯಕ್ತಿಯನ್ನು ಕಾಣಬಹುದು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ವೀಡಿಯೊ ವರ್ತಮಾನದ್ದಲ್ಲ, ಬದಲಾಗಿ ಒಂದು ತಿಂಗಳ ಹಿಂದಿನದು ಎಂಬುದು ಖಚಿತ. ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ ವೈರಲ್ ವೀಡಿಯೊ ಅಯತೊಲ್ಲ ಅಲಿ ಖಮೇನಿ ಅವರ ಅಂತಿಮ ಯಾತ್ರೆಯದ್ದಲ್ಲ, ಇದು ಇರಾಕ್‌ನ ಶುವಾಯ್ಲತ್ ಎಂಬ ಬುಡಕಟ್ಟಿನ ಮುಖ್ಯಸ್ಥ ಶೇಖ್ ಅರ್ಕನ್ ಹಮೀದ್ ಮೋಹನ್ ಅಲ್-ಖೈರುಲ್ಲಾ ಅವರ ನಿಧನದ ವೀಡಿಯೊ ಆಗಿದೆ.

Fact Check: Video shows Houthi strikes on Riyadh? No, here are the facts

Fact Check: നേപ്പാളില്‍ പ്രളയത്തിനിടെ ഡാം തകരുന്ന ദൃശ്യം? വീഡിയോയുടെ സത്യമറിയാം

Fact Check: மது அருந்துவோருக்கு இலவசப் பேருந்து பயணம் என்று அமைச்சர் விக்னேஷ் அறிவித்தாரா? உண்மை என்ன

Fact Check: ರಾಹುಲ್-ಪ್ರಿಯಾಂಕಾ ಗಾಂಧಿ ಅವರ ಉಪಾಹಾರ ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೂರವಿಡಲಾಗಿದೆ? ಸುಳ್ಳು, ಸತ್ಯ ಇಲ್ಲಿದೆ

Fact Check: బంగ్లాదేశ్‌లో హిందూ ఉపాధ్యాయురాలిపై అత్యాచారం, హత్య చేసిన ముస్లిం వ్యక్తి? కాదు, ఇది స్క్రిప్టెడ్ వీడియో