Kannada

Fact Check: ಗೇಟ್ವೇ ಆಫ್ ಇಂಡಿಯಾದ ತಡೆಗೋಡೆ ದಾಟಿ ತಾಜ್ ಹೋಟೆಲ್ಗೆ ಬಡಿದ ಅಲೆಗಳು: ವೈರಲ್ ವೀಡಿಯೊ ಹಳೇದು

ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು,

Southcheck Network

ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಗೇಟ್ವೇ ಆಫ್ ಇಂಡಿಯಾದ ತಡೆಗೋಡೆ ದಾಟಿ ಅಲೆಗಳು ತಾಜ್ ಹೋಟೆಲ್ಗೆ ಬಡಿಯುತ್ತಿರುವುದು ಈ ವೀಡಿಯೊದಲ್ಲಿ ಸೆರೆಯಾಗಿದೆ.

ಮುಂಬೈ ನ್ಯೂಸ್ ಎಂಬ ಎಕ್ಸ್ ಖಾತೆಯಿಂದ ಜುಲೈ 25 ರಂದು ಈ ವೀಡಿಯೊ ಅಪ್ಲೋಡ್ ಆಗಿದ್ದು, ''ವೈರಲ್| ಅರೇಬಿಯನ್ ಸಮುದ್ರವು ಇಂದು ತಾಜ್ ಮಹಲ್ ಹೋಟೆಲ್ ಅನ್ನು ಸ್ಪರ್ಶಿಸಲು ಗೇಟ್ವೇ ಆಫ್ ಇಂಡಿಯಾ ಬಳಿಯ ತಡೆಗೋಡೆಗಳನ್ನು ದಾಟಿದೆ,'' ಎಂದು ಬರೆಯಲಾಗಿದೆ. ಸಾಕಷ್ಟು ವೈರಲ್ ಆಗಿರುವ ಈ ವೀಡಿಯೊ 133.4K ಗೂ ಅಧಿಕ ವೀಕ್ಷಣೆ ಕಂಡಿದೆ. 1.5K ಗೂ ಅಧಿಕ ಲೈಕ್ಸ್ ಬಂದಿದೆ.

ಹಾಗೆಯೆ ಟಿಜಿಎನ್ ಚಾನೆಲ್ (TGN Channel) ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಕೂಡ ಇದೇ ವೀಡಿಯೊವನ್ನು ಜುಲೈ 25, 2024 ರಂದು ಹಂಚಿಕೊಂಡಿದ್ದು, 'ಮುಂಬೈನಲ್ಲಿ ರೆಡ್ ಅಲರ್ಟ್, ಮನೆಯಿಂದ ಹೊರಬರದಂತೆ ಎಚ್ಚರಿಕೆ' ಎಂದು ಶೀರ್ಷಿಕೆ ನೀಡಿದೆ.

ಇದೇರೀತಿಯ ಅನೇಕ ವೀಡಿಯೊಗಳನ್ನು ನೀವಿಲ್ಲಿ ಕಾಣಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋಧಿಸಿದಾಗ, ಈ ವೈರಲ್ ವೀಡಿಯೊದ ಹಿಂದಿನ ನಿಜಾಂಶ ಏನು ಎಂಬುದು ತಿಳಿಯಿತು. ಗೇಟ್ವೇ ಆಫ್ ಇಂಡಿಯಾದ ತಡೆಗೋಡೆ ದಾಟಿ ತಾಜ್ ಹೋಟೆಲ್ಗೆ ಅಲೆಗಳು ಬಡಿಯುತ್ತಿದೆ ಎಂದು ಹೇಳಲಾಗುತ್ತಿರುವ ವೀಡಿಯೊ ಇತ್ತೀಚಿನದಲ್ಲ. ಇದು 2021 ರಲ್ಲಿ ನಡೆದ ಘಟನೆಯ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಮೂರು ವರ್ಷದ ಹಿಂದೆ ಎನ್ಎಸ್ ನೌ (ನ್ಯೂಸ್ ಸ್ಟಾರ್ಟ್ ನೌ) ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಆದ ವೀಡಿಯೊ ಸಿಕ್ಕಿತು. ಮೇ 19, 2021 ರಂದು ಈ ಯೂಟ್ಯೂಬ್ ಚಾನೆಲ್ನಲ್ಲಿ ''ಗೇಟ್‌ವೇ ಆಫ್ ಇಂಡಿಯಾ ಮುಂಬೈ ಇನ್ ಟೌಕ್ಟೆ ತೂಫಾನ್,'' ಎಂಬ ಶೀರ್ಷಿಕೆಯೊಂದು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಹಾಗೆಯೆ ಡಿಜೆ ವೆಬ್ ಸೊಲ್ಯೂಷನ್ ಎಂಬ ಯೂಟ್ಯೂಬ್ ಖಾತೆಯಿಂದ ಮೇ 18, 2021 ರಂದು ಇದೇ ವೀಡಿಯೊ ಅಪ್ಲೋಡ್ ಆಗಿದೆ. ಟೌಕ್ಟೆ ಚಂಡಮಾರುತದಿಂದ ತಾಜ್ ಹೋಟೆಲ್ನಲ್ಲಿ ಅವ್ಯವಸ್ಥೆ ಉಂಟಾಗಿದೆ ಎಂದು ಬರೆಯಲಾಗಿದೆ.

ಇದೇ ರೀತಿಯ ವೀಡಿಯೊವನ್ನು ಎಬಿಸಿ ನ್ಯೂಸ್ ಮೇ 17, 2021 ರಂದು ತನ್ನ ಎಕ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದೆ. 'ಮುಂಬೈನ ತಾಜ್ ಹೋಟೆಲ್ ಮತ್ತು ಗೇಟ್‌ವೇ ಆಫ್ ಇಂಡಿಯಾದಲ್ಲಿ ಟೌಕ್ಟೆ ಚಂಡಮಾರುತದಿಂದಾಗಿ ಎತ್ತರದ ಅಲೆಗಳು ಎದ್ದಿವೆ' ಎಂದು ವರದಿಯಾಗಿದೆ.

ಟೌಕ್ಟೆ ಚಂಡಮಾರುತದ ಬಗ್ಗೆ ಝೀ ನ್ಯೂಸ್ ಕನ್ನಡ ವೆಬ್ಸೈಟ್ ಕೂಡ ಮೇ 17, 2021 ರಂದು ವರದಿ ಪ್ರಕಟಿಸಿತ್ತು. ಇದಕ್ಕೆ 'ಮುಂಬೈ 'Gateway of India'ಗೆ ಅಪ್ಪಳಿಸಿದ ತೌಕ್ತೆ ಚಂಡಮಾರುತ! ಇಲ್ಲಿದೆ ವಿಡಿಯೋ' ಎಂಬ ಶೀರ್ಷಿಕೆ ನೀಡಲಾಗಿದೆ.

ಹೀಗಾಗಿ, ಸದ್ಯ ವೈರಲ್ ಆಗುತ್ತಿರುವ ವೀಡಿಯೊ ಹಳೇಯದ್ದಾಗಿದ್ದು ಸುಳ್ಳು ಮಾಹಿತಿಯೊಂದಿಗೆ ಎಲ್ಲೆಡೆ ಹರಿದಾಡುತ್ತಿದೆ. ಈ ಮೂಲಕ ಗೇಟ್ವೇ ಆಫ್ ಇಂಡಿಯಾದ ತಡೆಗೋಡೆ ದಾಟಿ ತಾಜ್ ಹೋಟೆಲ್ಗೆ ಅಲೆಗಳು ಬಡಿಯುತ್ತಿರುವುದು ವೀಡಿಯೊ ಇತ್ತೀಚಿನದಲ್ಲ ಎಂದು ನಾವು ಖಚಿತ ಪಡಿಸುತ್ತೇವೆ.

Fact Check: Vijay Devarakonda parkour stunt video goes viral? No, here are the facts

Fact Check: ഗോവിന്ദച്ചാമി ജയില്‍ ചാടി പിടിയിലായതിലും കേരളത്തിലെ റോഡിന് പരിഹാസം; ഈ റോഡിന്റെ യാഥാര്‍ത്ഥ്യമറിയാം

Fact Check: ஏவுகணை ஏவக்கூடிய ட்ரோன் தயாரித்துள்ள இந்தியா? வைரல் காணொலியின் உண்மை பின்னணி

Fact Check: ಬುರ್ಖಾ ಧರಿಸಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನ ಬಾಂಗ್ಲಾದೇಶದ ವೀಡಿಯೊ ಭಾರತದ್ದು ಎಂದು ವೈರಲ್

Fact Check: హైదరాబాద్‌లో ఇంట్లోకి చొరబడి పూజారిపై దాడి? లేదు, నిజం ఇక్కడ తెలుసుకోండి