Top Stories

Fact Check: ರಾಹುಲ್ ಗಾಂಧಿ ಕೈ ತೊಳೆದು ಶೂ ಧರಿಸುತ್ತಾರೆ ಎಂಬ ಹೇಳಿಕೆ ಸುಳ್ಳು, ಸತ್ಯಾಂಶ ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವೀಡಿಯೊ ಒಂದು ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ರಾಹುಲ್ ಗಾಂಧಿ ಮೊದಲು ಕೈ ತೊಳೆದು ನಂತರ ಶೂ ಧರಿಸುವುದನ್ನು ಕಾಣಬಹುದು.

Vinay Bhat

ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವೀಡಿಯೊ ಒಂದು ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ರಾಹುಲ್ ಗಾಂಧಿ ಮೊದಲು ಕೈ ತೊಳೆದು ನಂತರ ಶೂ ಧರಿಸುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬೂಟುಗಳನ್ನು ಧರಿಸಿದ ನಂತರ ಜಗತ್ತು ತನ್ನ ಕೈಗಳನ್ನು ತೊಳೆಯುತ್ತದೆ, ಪಪ್ಪು ಕೈತೊಳೆದು ಬೂಟುಗಳನ್ನು ಧರಿಸುತ್ತಾನೆ. ಇದು ವಿಭಿನ್ನ ಮಾದರಿ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಅರ್ಧದಿಂದ ಎಡಿಟ್ ಮಾಡಿ ಕ್ಲಿಪ್ ಆಗಿದ್ದು, ವಾಸ್ತವವಾಗಿ ರಾಹುಲ್ ಗಾಂಧಿ ಊಟ ಮಾಡಿದ ನಂತರ ಕೈ ತೊಳೆದು ಶೂ ಧರಿಸಿದ್ದಾರೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಕ್ಲಿಪ್‌ನ ಪ್ರಮುಖ ಚೌಕಟ್ಟುಗಳನ್ನು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದಾಗ ಜನವರಿ 29, 2021 ರಂದು ‘ವಿಲೇಜ್ ಕುಕಿಂಗ್ ಚಾನೆಲ್' ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ಪೂರ್ಣ ಆವೃತ್ತಿಯ ಸಿಕ್ಕಿದೆ. ವೈರಲ್ ವೀಡಿಯೊದಲ್ಲಿ 11.55 ಸೆಕೆಂಡುಗಳಿಂದ 12.24 ಸೆಕೆಂಡುಗಳವರೆಗಿನ ಚೌಕಟ್ಟಿನಲ್ಲಿ, ವೈರಲ್ ವೀಡಿಯೊದ ಕ್ಲಿಪ್‌ನ ಸಂಪೂರ್ಣ ಆವೃತ್ತಿಯನ್ನು ಕಾಣಬಹುದು.

ಈ ವೀಡಿಯೊದಲ್ಲಿ ರಾಹುಲ್ ಗಾಂಧಿ ಮೊದಲು ಕೆಲ ಜನರೊಂದಿಗೆ ಕುಳಿತು ಊಟ ಮಾಡುತ್ತಾರೆ. ನಂತರ ಊಟ ಮುಗಿಸಿದ ಬಳಿಕ ಓರ್ವ ವ್ಯಕ್ತಿ ರಾಹುಲ್ ಗಾಂಧಿಗೆ ಕೈಗಳನ್ನು ತೊಳೆಯಲು ಸಹಾಯ ಮಾಡುತ್ತಾರೆ, ನಂತರ ಅವರು ತಮ್ಮ ಬೂಟುಗಳನ್ನು ಧರಿಸುತ್ತಾರೆ.

ಈ ಮಾಹಿತಿಯ ಆಧಾರದ ಮೇಲೆ ನಾವು ‘ರಾಹುಲ್ ಗಾಂಧಿ ವಿಲೇಜ್ ಕುಕಿಂಗ್ ಚಾನೆಲ್’ ಎಂಬ ಕೀವರ್ಡ್ ಬಳಸಿ ಸರ್ಚ್ ಮಾಡಿದ್ದೇವೆ. ಆಗ ಜನವರಿ 30, 2021 ರಂದು ನ್ಯೂಸ್ 18 ಹಿಂದಿ ವರದಿ ನಮಗೆ ಸಿಕ್ಕಿತು. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ರಾಹುಲ್ ಗಾಂಧಿ 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷಕ್ಕಾಗಿ ಪ್ರಚಾರ ಮಾಡುತ್ತಿದ್ದರು ಮತ್ತು ಈ ಸಮಯದಲ್ಲಿ ಅವರು ಅಲ್ಲಿನ ವಿಲೇಜ್ ಕುಕಿಂಗ್ ಚಾನೆಲ್ ಎಂಬ ಯೂಟ್ಯೂಬ್ ಚಾನೆಲ್ ಕಾರ್ಯಕ್ರಮಕ್ಕೂ ಭೇಟಿ ನೀಡಿದ್ದರು, ಅಲ್ಲಿ ಅವರು ಮಶ್ರೂಮ್ ಬಿರಿಯಾನಿ ಸವಿದರು’’ ಎಂದು ಬರೆಯಲಾಗಿದೆ.

ದಿ ನ್ಯೂಸ್ ಮಿನಿಟ್ ಕೂಡ ಜನವರಿ 30, 2021 ರಂದು, ‘‘ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮಿಳು ಅಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಥಳೀಯರೊಂದಿಗೆ ಊಟ ಮಾಡುತ್ತಿರುವ ಹೃದಯಸ್ಪರ್ಶಿ ವಿಡಿಯೋ ಅಂತರ್ಜಾಲದಲ್ಲಿ ಎಲ್ಲರ ಹೃದಯ ಗೆದ್ದಿದೆ. ಕಳೆದ ವಾರ ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡಿನಲ್ಲಿದ್ದ ರಾಹುಲ್ ಗಾಂಧಿ, ಜನಪ್ರಿಯ ಯೂಟ್ಯೂಬ್ ಚಾನೆಲ್ 'ವಿಲೇಜ್ ಕುಕಿಂಗ್ ಚಾನೆಲ್' ನ ಅಡುಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಶುಕ್ರವಾರ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾದ 14 ನಿಮಿಷಗಳ ವಿಡಿಯೋದಲ್ಲಿ, ರಾಹುಲ್ ಗಾಂಧಿ ಅಡುಗೆಯವರೊಂದಿಗೆ ಮಶ್ರೂಮ್ ಬಿರಿಯಾನಿ ಸೇವಿಸಿದ್ದಾರೆ’’ ಎಂದು ವರದಿಯಲ್ಲಿದೆ.

2021 ರ ತಮಿಳುನಾಡು ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ ಯೂಟ್ಯೂಬ್ ಚಾನೆಲ್ ಕಾರ್ಯಕ್ರಮದಲ್ಲಿ ಆಹಾರ ಸೇವಿಸುತ್ತಿರುವ ವೀಡಿಯೊದ ಎಡಿಟ್ ಕ್ಲಿಪ್ ಅನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Joe Biden serves Thanksgiving dinner while being treated for cancer? Here is the truth

Fact Check: അസദുദ്ദീന്‍ ഉവൈസി ഹനുമാന്‍ വിഗ്രഹത്തിന് മുന്നില്‍ പൂജ നടത്തിയോ? വീഡിയോയുടെ സത്യമറിയാം

Fact Check: சென்னை சாலைகளில் வெள்ளம் என்று வைரலாகும் புகைப்படம்?உண்மை அறிக

Fact Check: ಶ್ರೀಲಂಕಾದ ಪ್ರವಾಹದ ಮಧ್ಯೆ ಆನೆ ಚಿರತೆಯನ್ನು ರಕ್ಷಿಸುತ್ತಿರುವ ಈ ವೀಡಿಯೊ AI- ರಚಿತವಾಗಿವೆ

Fact Check: శ్రీలంక వరదల్లో ఏనుగు కుక్కని కాపాడుతున్న నిజమైన దృశ్యాలా? కాదు, ఇది AI-జనరేటెడ్ వీడియో