Kannada

Fact Check: ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಅಯೋಧ್ಯೆಯ ಮತದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದರೇ?

2024ರ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಅಯೋಧ್ಯೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದಕ್ಕೆ ಮತದಾರರ ಮೇಲೆ ಸೋನು ನಿಗಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾದ ಪೋಸ್ಟ್ ಒಂದು ವೈರಲಾಗುತ್ತಿದೆ.

Southcheck Network

ಹೈದರಾಬಾದ್: ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದ ನಂತರ, ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದಕ್ಕೆ ಅಲ್ಲಿನ ಮತದಾರರನ್ನು ದೂಷಿಸಿದ್ದಾರೆ ಎನ್ನುವ ಹಲವು ಪೋಸ್ಟ್ ‌ಗಳು ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗುತ್ತಿದೆ. ಸೋನು ನಿಗಮ್ ಎಂಬ ಹೆಸರಿನ X ಅಕೌಂಟ್ ಮೂಲಕ ಮಾಡಲಾದ ಒಂದು ಪೋಸ್ಟ್ ಒಂದರ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡು ಈ ರೀತಿಯ ಒಂದು ಪೋಸ್ಟ್ ವೈರಲ್ ಆಗಿದೆ.

ವುಮೆನ್ಸ್ ಎರಾ ಎಂಬ X ಖಾತೆಯಲ್ಲಿ ಸೋನು ನಿಗಮ್ ಅವರು ಅಯೋಧ್ಯೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣರಾದ ಮತದಾರರ ವಿರುದ್ಧ ಸಿಡಿದೆದ್ದಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ.

ಸೋನು‌ನಿಗಮ್ ಎಂಬ ಹೆಸರಿನ X ಖಾತೆಯಲ್ಲಿ ಮಾಡಲಾದ ಪೋಸ್ಟ್ ನಲ್ಲಿ ಈ ರೀತಿ ಬರೆದಿದ್ದಾಗಿ ಕಾಣಬಹುದು: "ಇಡೀ ಅಯೋಧ್ಯೆಯನ್ನು ಬೆಳಗಿದ ಸರ್ಕಾರ, ಅಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಿದೆ, ಅಲ್ಲಿ ರೈಲ್ವೆ ನಿಲ್ದಾಣವನ್ನು ಮಾಡಿದೆ, 500 ವರ್ಷಗಳ ನಂತರ ರಾಮಮಂದಿರವನ್ನು ನಿರ್ಮಿಸಿದೆ, ಸಂಪೂರ್ಣ ಮಂದಿರ, ಒಳ್ಳೆಯ ಆರ್ಥಿಕ ವ್ಯವಸ್ಥೆ ನೀಡಿದ ಆ ಪಕ್ಷವು ಅಯೋಧ್ಯೆ ಸೀಟಿನ ಮೇಲೆ ಹೋರಾಟ ಮಾಡುವಂತಾಗಿದೆ. ಅಯೋಧ್ಯೆ ನಿವಾಸಿಗಳಿಗೆ ನಾಚಿಕೆಯಾಗಬೇಕು"

ಈ ಪೋಸ್ಟ್‌ನ ಸ್ಕ್ರೀನ್ ಶಾಟ್ ಹಂಚಿಕೊಂಡು ಹಲವು ಖಾತೆಗಳಲ್ಲೂ ಸೋನು ನಿಗಮ್ ಮತದಾರರನ್ನು ಟೀಕಿಸಿದ್ದಾರೆ ಎಂದು ಬರೆಯಲಾಗಿದೆ.

ಫ್ಯಾಕ್ಟ್‌ಚೆಕ್: ಪ್ರಸ್ತುತ ಪೋಸ್ಟ್‌ನ ಸತ್ಯಾಂಶವನ್ನು ಕಂಡುಹಿಡಿಯಲು ನಾವು ಹೋದಾಗ ಇದು ಜನರನ್ನು ತಪ್ಪುದಾರಿಗೆಳೆಯಲು ರಚಿಸಲಾಗಿದ್ದು ಎಂದು ತಿಳಿದು ಬಂದಿದೆ.

ಸ್ಕ್ರೀನ್ ಶಾಟ್ ಅನ್ನು ಸರಿಯಾಗಿ ಗಮನಿಸಿದರೆ ಪೋಸ್ಟ್ ಮಾಡಲಾದ ಖಾತೆಯ ಯೂಸರ್ ನೇಮ್ @Sonunigamsin ಎಂಬುದಾಗಿ ಕಾಣಬಹುದು. ಅಸಲಿಗೆ ಈ ಖಾತೆಯು ಹಿನ್ನೆಲೆ ಗಾಯಕ ಸೋನು ನಿಗಮ್ ಅವರಿಗೆ ಸೇರಿದ್ದಲ್ಲ, ಬದಲಾಗಿ ಸೋನು ನಿಗಮ್ ಸಿಂಗ್ ಎಂಬವರಿಗೆ ಸೇರಿದ್ದಾಗಿದೆ.

ಸ್ವತಃ ಗಾಯಕ ಸೋನು ನಿಗಮ್ ಅವರು ಕೂಡ ಈ ಖಾತೆ ತಮ್ಮದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಏಳು ವರ್ಷಗಳ ಹಿಂದೆಯೃ ತಮ್ಮ ಖಾತೆಯನ್ನು ಸ್ಥಗಿತಗೊಳಿಸಿದ್ದಾಗಿ ಅವರು ತಿಳಿಸಿದ್ದಾರೆ. Hindustan Times ಗೆ ಈ ಬಗ್ಗೆ ಕೊಟ್ಟ ಹೇಳಿಕೆಯಲ್ಲಿ ಹೀಗಿದೆ: “ನನ್ನ ಬಗ್ಗೆ ಜನರು ಮತ್ತು ಮಾಧ್ಯಮಗಳು ತಪ್ಪಾಗಿ ಗ್ರಹಿಸಿದ್ದನ್ನು ನೋಡುವಾಗ ಆಶ್ಚರ್ಯವೆನಿಸುತ್ತದೆ. ಖಾತೆಯಲ್ಲಿ ಕೊಟ್ಟಿರುವ ವಿವರಣೆಯನ್ನು ಓದುವಷ್ಟು ಸಂಯಮ ಇರಲಿಲ್ಲ. ಅವರ ಹ್ಯಾಂಡಲ್ನಲ್ಲಿ 'ಸೋನು ನಿಗಮ್ ಸಿಂಗ್' ಎಂದು ಕಾಣಬಹುದು ಮತ್ತು ಬಯೋದಲ್ಲಿ ಅವರು ಬಿಹಾರದ ಕ್ರಿಮಿನಲ್ ವಕೀಲ ಎಂದು ಬರೆಯಲಾಗಿದೆ". ಮುಂದುವರೆದು, “ಏಳು ವರ್ಷಗಳ ಹಿಂದೆ ಟ್ವಿಟರ್‌ನಿಂದ ನಾನು ಇಂತಹದ್ದೇ ಕಾರಣಗಳಿಂದ ಬಲವಂತವಾಗಿ ಟ್ವಿಟರ್ ನಿಂದ ಹೊರಬಂದಿದ್ದೆ. ಯಾವುದೇ ಸಂವೇದನಾಶೀಲ ರಾಜಕೀಯ ಟೀಕೆಗಳನ್ನು ನಾನು ಮಾಡುವುದಿಲ್ಲ ಮತ್ತು ನಾನು ನನ್ನ ಕೆಲಸದ ಮೇಲೆ ಮಾತ್ರ ಗಮನ ಹರಿಸುತ್ತಿದ್ದೇನೆ. ಆದರೆ ಈ ಘಟನೆಯು ನನಗೆ ಮಾತ್ರವಲ್ಲ, ನನ್ನ ಕುಟುಂಬದ ಸುರಕ್ಷತೆಗೂ ಆತಂಕಕಾರಿಯಾಗಿದೆ" ಎಂದಿದ್ದಾರೆ.

Aajtak ನಲ್ಲೂ ಈ ಬಗ್ಗೆ ಗಾಯಕರ ಹೇಳಿಕೆಯ ವರದಿ ಪ್ರಕಟಿಸಲಾಗಿದೆ.

ಇಷ್ಟೆಲ್ಲಾ ಆದ ಬಳಿಕ ಆ ಪೋಸ್ಟ್ ಹಾಕಿದ ವ್ಯಕ್ತಿ ಸೋನು ನಿಗಮ್ ಸಿಂಗ್ ಎಂಬವರು "ಇದು ತನ್ನದೇ ಖಾತೆಯಾಗಿದ್ದು, ಗಾಯಕ ಸೋನು ನಿಗಮ್ ಅವರದ್ದಲ್ಲ. ನನ್ನ ಪೋಷಕರು ನನಗೆ ಅದೇ ರೀತಿಯ ಹೆಸರಿಟ್ಟಿದ್ದಾರೆ. ನಮ್ಮ ಹೆಸರು ಒಂದೇ ರೀತಿಯಲ್ಲಿ ಇರುವುದು ಕಾಕತಾಳೀಯವೇ ಹೊರತು ಉದ್ದೇಶಪೂರ್ವಕವಲ್ಲ" ಎಂದು ತಮ್ಮ X ಖಾತೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

ಸ್ವತಃ ಗಾಯಕ ಸೋನು ನಿಗಮ್ ಅವರು ಸ್ಪಷ್ಟಪಡಿಸರುವಂತೆ ಇದು ಅವರ ಖಾತೆಯಲ್ಲ, ಹೊರತು ಅದೇ ಹೆಸರಿನ ಒಬ್ಬ ವ್ಯಕ್ತಿಯ ಖಾತೆಯಿಂದ ಮಾಡಲಾದ ಪೋಸ್ಟ್ ಎಂದು ನಾವು ಕಂಡು ಹಿಡಿದಿದ್ದೇವೆ.

ಜೂನ್ 4 ರಂದು ಪ್ರಕಟವಾದ ರಾಮಜನ್ಮಭೂಮಿ ಅಯೋಧ್ಯೆ ಇರುವ ಫೈಝಾಬಾದ್ ಕ್ಷೇತ್ರದ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಾಗ ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರು ಬಿಜೆಪಿಯ ಲಲನ್ ಸಿಂಗ್ ಅವರನ್ನು ಸೋಲಿಸಿ ಶಾಕ್ ಕೊಟ್ಟಿದ್ದರು. ಈ ಫಲಿತಾಂಶ ಇಡೀ ದೇಶದ ಜನರ ಹುಬ್ಬೇರಿಸಿತ್ತು.

Claim: ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಅಯೋಧ್ಯೆಯ ಮತದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿ X ನಲ್ಲಿ ಪೋಸ್ಟ್ ಮಾಡಿದ್ದಾರೆ

Fact Check: ಇದು ಗಾಯಕ ಸೋನು ನಿಗಮ್ ಅವರ ಖಾತೆಯಲ್ಲ. ಅವರು ಕಳೆದ ಏಳು ವರ್ಷಗಳಿಂದ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಸ್ವತಃ ಸೋನು ಅವರೇ ಸ್ಪಷ್ಟಪಡಿಸಿದ್ದಾರೆ.

Fact Check: Jio recharge for a year at just Rs 399? No, viral website is a fraud

Fact Check: മുക്കം ഉമര്‍ ഫൈസിയെ ഓര്‍ഫനേജ് കമ്മിറ്റിയില്‍നിന്ന് പുറത്താക്കിയോ? സത്യമറിയാം

Fact Check: தந்தையும் மகனும் ஒரே பெண்ணை திருமணம் செய்து கொண்டனரா?

Fact Check: ಹಿಂದೂ ಮಹಿಳೆಯೊಂದಿಗೆ ಜಿಮ್​​ನಲ್ಲಿ ಮುಸ್ಲಿಂ ಜಿಮ್ ಟ್ರೈನರ್ ಅಸಭ್ಯ ವರ್ತನೆ?: ವೈರಲ್ ವೀಡಿಯೊದ ನಿಜಾಂಶ ಇಲ್ಲಿದೆ

ఫాక్ట్ చెక్: కేటీఆర్ ఫోటో మార్ఫింగ్ చేసినందుకు కాదు.. భువ‌న‌గిరి ఎంపీ కిర‌ణ్ కుమార్ రెడ్డిని పోలీసులు కొట్టింది.. అస‌లు నిజం ఇది