Kannada

Fact Check: ಪಾಕಿಸ್ತಾನದ ಲಿಬಾ ಕಣಿವೆಯಲ್ಲಿದ್ದ ಸೇನಾ ಗೋದಾಮು ಸ್ಫೋಟಕ ಎಂದು ಇರಾನಿನ ವೀಡಿಯೊ ವೈರಲ್

ಇದು ಪಾಕಿಸ್ತಾನಕ್ಕೆ ಸಂಬಂಧಿಸಿದ ವೀಡಿಯೊವೇ ಅಲ್ಲ. ಇರಾನಿನ ಬಂದರ್ ಅಬ್ಬಾಸ್‌ನ ಬಂದರ್ ರಾಜೈನಲ್ಲಿ ಸ್ಫೋಟ ಸಂಭವಿಸಿದ ವೀಡಿಯೊ ಇದಾಗಿದೆ.

Vinay Bhat

ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮಗಲ್ಲಿ ಅನೇಕ ಊಹಾಪೋಹಗಳು ಹರಡುತ್ತಿವೆ. ಇದೀಗ ಸಾಮಾಜಿಕ ತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು ಬಂದರಿನಂತೆ ಕಾಣುವ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕಾಣದ ಕೈಗಳ ಕೃಪೆಯಿಂದ ಪಾಕಿಸ್ತಾನ ಲಿಬಾ ಕಣಿವೆಯಲ್ಲಿದ್ದ ಪಾಕಿ ಸೇನಾ ಗೋದಾಮು (ತನ್ನಿಂದ ತಾನೇ ) ಸ್ಪೋಟ ಗೊಂಡಿದೆ’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಪಾಕಿಸ್ತಾನಕ್ಕೆ ಸಂಬಂಧಿಸಿದ ವೀಡಿಯೊವೇ ಅಲ್ಲ. ಇರಾನಿನ ಬಂದರ್ ಅಬ್ಬಾಸ್‌ನ ಬಂದರ್ ರಾಜೈನಲ್ಲಿ ಸ್ಫೋಟ ಸಂಭವಿಸಿದ ವೀಡಿಯೊ ಇದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಆಗ ಏಪ್ರಿಲ್ 26, 2025 ರಂದು Iranian American community of Georgia ಎಕ್ಸ್ ಖಾತೆ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂತು. ಇದಕ್ಕೆ ‘‘ಬಂದರ್ ಅಬ್ಬಾಸ್‌ನ ಬಂದರ್ ರಾಜೈನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ಭೀಕರತೆ 10 ಕಿಲೋಮೀಟರ್ ದೂರದವರೆಗೂ ಕಂಡುಬಂತು. ಇದು ಎಷ್ಟು ತೀವ್ರವಾಗಿತ್ತೆಂದರೆ ಹಾರ್ಮೋಜ್ಗನ್ ಸ್ಟೀಲ್ ಫ್ಯಾಕ್ಟರಿ ಮತ್ತು ಕವೇ ಸ್ಟೀಲ್ ಪ್ಲಾಂಟ್‌ನ ಕಿಟಕಿಗಳನ್ನು ಪುಡಿಪುಡಿ ಆಗಿದೆ’’ ಎಂದು ಕ್ಯಾಪ್ಶನ್ ನೀಡಲಾಗಿದೆ.

ಇದೇವೇಳೆ ಯಾಹೂ ನ್ಯೂಸ್​ Associated Press Videos ಏಪ್ರಿಲ್ 26, 2025 ರಂದು ಹಂಚಿಕೊಂಡ ಸುದ್ದಿ ಕೂಡ ಕಂಡುಬಂತು. ಇದರಲ್ಲಿ ಕೂಡ ಅದೇ ವೈರಲ್ ವೀಡಿಯೊ ಇದೆ. ‘‘ಇರಾನ್ ಬಂದರಿನಲ್ಲಿ ಕ್ಷಿಪಣಿ ಇಂಧನ ಸಾಗಣೆಗೆ ಸಂಬಂಧಿಸಿದ ಭಾರಿ ಸ್ಫೋಟ ಸಂಭವಿಸಿದೆ. 4 ಸಾವು ಹಾಗೂ 500 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಕ್ಷಿಪಣಿ ಪ್ರೊಪೆಲ್ಲಂಟ್ ತಯಾರಿಸಲು ಬಳಸುವ ರಾಸಾಯನಿಕ ಪದಾರ್ಥದ ಸಾಗಣೆಗೆ ಸಂಬಂಧಿಸಿದೆ ಎಂದು ಹೇಳಲಾದ ದಕ್ಷಿಣ ಇರಾನ್‌ನ ಬಂದರಿನಲ್ಲಿ ಈ ಭಾರಿ ಸ್ಫೋಟ ಮತ್ತು ಬೆಂಕಿ ಸಂಭವಿಸಿದೆ’’ ಎಂಬ ಮಾಹಿತಿ ಇದರಲ್ಲಿದೆ.

ಏಪ್ರಿಲ್ 26, 2025 ರಂದು ಎನ್​ಬಿಸಿ ಸೇರಿದಂತೆ ಅನೇಕ ಮಾಧ್ಯಮಗಳು ವೈರಲ್ ವೀಡಿಯೊಕ್ಕೆ ಹೋಲು ಸ್ಕ್ರೀನ್ ಶಾಟ್​ನೊಂದಿಗೆ ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘‘ಕ್ಷಿಪಣಿ ಪ್ರೊಪೆಲ್ಲಂಟ್ ತಯಾರಿಸಲು ಬಳಸುವ ರಾಸಾಯನಿಕ ಪದಾರ್ಥದ ಸಾಗಣೆಗೆ ಸಂಬಂಧಿಸಿದೆ ಎಂದು ಹೇಳಲಾದ ದಕ್ಷಿಣ ಇರಾನ್‌ನ ಬಂದರಿನಲ್ಲಿ ಶನಿವಾರ ಭಾರಿ ಸ್ಫೋಟ ಮತ್ತು ಬೆಂಕಿ ಸಂಭವಿಸಿದೆ’’ ಬರೆದುಕೊಂಡಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಪಾಕಿಸ್ತಾನದ ಲಿಬಾ ಕಣಿವೆಯಲ್ಲಿದ್ದ ಸೇನಾ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Muslims set fire to Hindu neighbourhood in Bangladesh? No, here are the facts

Fact Check: നേപ്പാളില്‍ പ്രളയത്തിനിടെ ഡാം തകരുന്ന ദൃശ്യം? വീഡിയോയുടെ സത്യമറിയാം

Fact Check: மது அருந்துவோருக்கு இலவசப் பேருந்து பயணம் என்று அமைச்சர் விக்னேஷ் அறிவித்தாரா? உண்மை என்ன

Fact Check: ಬೇಲ್​ನಿಂದ ಹೊರಬಂದ ಬಳಿಕ ಸ್ವತಂತ್ರ ಭಾರದ್ವಾಜ್ ಅಟ್ಟಾಹಸ ಎಂದು ಹಳೆಯ ವಿಡಿಯೊ ವೈರಲ್

Fact Check: బంగ్లాదేశ్‌లో హిందూ ఉపాధ్యాయురాలిపై అత్యాచారం, హత్య చేసిన ముస్లిం వ్యక్తి? కాదు, ఇది స్క్రిప్టెడ్ వీడియో