Kannada

Fact Check: ಪಾಕಿಸ್ತಾನ ಸೈನಿಕರ ಸೇನಾ ವಾಹನ ಹೊಡೆದು ಹಾಕಿದ ಬಲೂಚ್ ಆರ್ಮಿ ಎಂದು ಯೆಮನ್‌ನ ವೀಡಿಯೊ ವೈರಲ್

ಪಾಕಿಸ್ತಾನ ಸೇನೆಯ ಮೇಲೆ ಇತ್ತೀಚೆಗೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ನಡೆಸಿದ ದಾಳಿ ಇದಾಗಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.

Vinay Bhat

ಸೇನಾ ಬೆಂಗಾವಲು ಪಡೆಯ ಮೇಲೆ ಹೊಂಚುದಾಳಿ ನಡೆಸುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಪಾಕಿಸ್ತಾನ ಸೇನೆಯ ಮೇಲೆ ಇತ್ತೀಚೆಗೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ನಡೆಸಿದ ದಾಳಿ ಇದಾಗಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯವನ್ನು ಹಂಚಿಕೊಂಡು, ‘‘ಹೇಡಿ ಪಾಕಿ ಸೈನಿಕರನ್ನು ಹೊಲ್ಸೇಲ್ ಆಗಿ ಹೇಗೆ ಹೊಡೀತಿದಾರೆ ನೋಡಿ ಬಲೂಚ್ ಆರ್ಮಿ ಯವರು’’ ಎಂದು ಬರೆದುಕೊಂಡಿದ್ದಾರೆ. (Archive)

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಹೇಳಿಕೆ ಸುಳ್ಳು ಎಂದು ಸೌತ್ ಚೆಕ್ ಕಂಡುಕೊಂಡಿದೆ. ವೈರಲ್ ಆದ ವೀಡಿಯೊ ಬಿಎಲ್‌ಎ ದಾಳಿಯನ್ನು ತೋರಿಸುತ್ತಿಲ್ಲ, ಬದಲಾಗಿ ಯೆಮೆನ್‌ನಲ್ಲಿ ಹೌತಿ ಗುಂಪಿನಿಂದ ಇಸ್ರೇಲಿ ತಾಣಗಳು ಮತ್ತು ಅಮೇರಿಕನ್ ಮತ್ತು ಬ್ರಿಟಿಷ್ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಮಿಲಿಟರಿ ತಾಲೀಮವನ್ನು ತೋರಿಸುತ್ತಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳನ್ನು ಹೊರತೆಗೆದು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಅಕ್ಟೋಬರ್ 15, 2024 ರಂದು ಅದೇ ದೃಶ್ಯಗಳನ್ನು ಒಳಗೊಂಡ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ನಮ್ಮನ್ನು ಕರೆದೊಯ್ಯಿತು. ಶೀರ್ಷಿಕೆಯು ವೀಡಿಯೊ ಯೆಮೆನ್‌ನಿಂದ ಬಂದಿದೆ ಎಂದು ಸುಳಿವು ನೀಡಿದೆ. ವೀಡಿಯೊದಲ್ಲಿನ ದಿನಾಂಕ '10.03.2024' ಎಂದು ಬರೆಯಲಾಗಿದೆ ಮತ್ತು ಮಧ್ಯಪ್ರಾಚ್ಯ ಸುದ್ದಿವಾಹಿನಿಯ ಅಲ್ ಅರಬಿ ಟಿವಿಯ ಲೋಗೋವನ್ನು ಸಹ ನೋಡಬಹುದು.

ಈ ಮಾಹಿತಿಯ ಆಧಾರದ ಮೇಲೆ ನಾವು ಅಲ್ ಅರಬಿ ಟಿವಿಯ ಯೂಟ್ಯೂಬ್ ಚಾನೆಲ್ ಅನ್ನು ಪರಿಶೀಲಿಸಿದಾಗ ಏಪ್ರಿಲ್ 21, 2024 ರಂದು ಅಪ್‌ಲೋಡ್ ಮಾಡಲಾದ ವೀಡಿಯೊದ ಪೂರ್ಣ ಆವೃತ್ತಿಯನ್ನು ಕಂಡುಕೊಂಡೆವು. ಅರೇಬಿಕ್ ಶೀರ್ಷಿಕೆಯು ಹೀಗೆ ನೀಡಲಾಗಿದೆ: ‘ವೀಕ್ಷಿಸಿ: ಹೌತಿ ಗುಂಪು ಇಸ್ರೇಲಿ ತಾಣಗಳಿಗೆ ನುಗ್ಗಿ ಅಮೆರಿಕನ್ ಮತ್ತು ಬ್ರಿಟಿಷ್ ಪಡೆಗಳನ್ನು ಗುರಿಯಾಗಿಸಿಕೊಂಡು ಮಿಲಿಟರಿ ತಂತ್ರಗಳನ್ನು ನಡೆಸುತ್ತದೆ’.

3:13 ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ, ವೈರಲ್ ಕ್ಲಿಪ್‌ನಲ್ಲಿ ಕಂಡುಬರುವ ನಿಖರವಾದ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ.

ಹೀಗಾಗಿ ಪಾಕಿಸ್ತಾನ ಸೇನೆಯ ಮೇಲೆ ಬಿಎಲ್‌ಎ ಹೊಂಚುದಾಳಿ ನಡೆಸುತ್ತಿದೆ ಎಂದು ಹೇಳಿಕೊಳ್ಳುವ ವೈರಲ್ ವೀಡಿಯೊ ಬಲೂಚಿಸ್ತಾನದ್ದಲ್ಲ. ಇದು ಯೆಮೆನ್‌ನಲ್ಲಿ ವಿದೇಶಿ ಪಡೆಗಳ ಮೇಲಿನ ದಾಳಿಗಳನ್ನು ಅನುಕರಿಸುವ ಹೌತಿ ಮಿಲಿಟರಿ ಕವಾಯತನ್ನು ತೋರಿಸುತ್ತದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Fact Check: Pro-Palestine march in Kerala? No, video shows protest against toll booth

Fact Check: ഓണം ബംപറടിച്ച സ്ത്രീയുടെ ചിത്രം? സത്യമറിയാം

Fact Check: கரூர் கூட்ட நெரிசலில் பாதிக்கப்பட்டவர்களை பனையூருக்கு அழைத்தாரா விஜய்?

Fact Check: Christian church vandalised in India? No, video is from Pakistan

Fact Check: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ರಶ್ಮಿಕಾ ರಿಯಾಕ್ಷನ್ ಎಂದು 2022ರ ವೀಡಿಯೊ ವೈರಲ್